'ಫ್ಯಾಮಿಲಿ ಪವರ್' ಬಗ್ಗೆ ಖುಷಿ ಜೊತೆ ಬೇಸರ ವ್ಯಕ್ತಪಡಿಸಿದ ವೀಕ್ಷಕರು | Filmibeat Kannada

2017-11-27 1

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸುಮಾರು ನಾಲ್ಕೈದು ವರ್ಷದ ನಂತರ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದು, ತಮ್ಮ 'ಫ್ಯಾಮಿಲಿ ಪವರ್' ಕಾರ್ಯಕ್ರಮದ ಮೊದಲ ಎಪಿಸೋಡ್ ಯಶಸ್ವಿಯಾಗಿ ಮೂಡಿಬಂದಿದೆ. ಇದೊಂದು ಪಕ್ಕಾ ಫ್ಯಾಮಿಲಿ ಗೇಮ್ ಶೋ ಆಗಿದ್ದು, ಕುಟುಂಬ ಸಮೇತ ವೀಕ್ಷಕರು ನೋಡಿ ಎಂಜಾಯ್ ಮಾಡಿದ್ದಾರೆ. ಈ ಕಾರ್ಯಕಮದಲ್ಲಿ ಜನರಿಗೆ ಏನು ಇಷ್ಟವಾಯಿತು, ಏನೂ ಇಷ್ಟವಾಗಿಲ್ಲ ಎಂಬುದು ಈಗ ಚರ್ಚೆಯಾಗುತ್ತಿದೆ. ಅಂದ್ಹಾಗೆ, ಪುನೀತ್ ಶೋನಲ್ಲಿ ಹೊಸತನವನ್ನ ಬಯಸಿ ಜನರು ಕಾಯುತ್ತಿದ್ದರು. ಆದ್ರೆ, ಪುನೀತ್ ಅವರನ್ನ ನೋಡಿ ಖುಷಿಪಟ್ಟ ವೀಕ್ಷಕರು ಆಟದ ಬಗ್ಗೆ ಕೊಂಚ ನಿರಾಸೆಗೊಂಡಿದ್ದಾರೆ. ಮುಂದೆ ಓದಿ.'ಫ್ಯಾಮಿಲಿ ಪವರ್' ಶೋ, ಸೂಪರ್ ಆಗಿದೆ, ಅದ್ಭುತವಾಗಿದೆ, ಚೆನ್ನಾಗಿದೆ ಎಂಬ ಮಾತು ವೀಕ್ಷಕರ ವಲಯದಲ್ಲಿದೆ. ಮೊದಲ ಎಪಿಸೋಡ್ ನಲ್ಲಿ ಟಿವಿ ಪ್ರೇಕ್ಷಕರನ್ನ ಪುನೀತ್ ಶೋ ರಂಜಿಸುವಲ್ಲಿ ಯಶಸ್ವಿಯಾಗಿದೆ.ಫ್ಯಾಮಿಲಿ ಪವರ್' ಕಾರ್ಯಕ್ರಮ ತುಂಬ ಚೆನ್ನಾಗಿ ಮೂಡಿ ಬರುತ್ತಿದೆ. ಅಪ್ಪು ಸರ್ ಅವರ ಸರಳತೆ ಮತ್ತು ಜನರ ಜೊತೆ ಅವರು ಬೆರೆಯುವ ಗುಣ ಇಷ್ಟ ಆಗ್ತಿದೆ ಎಂದು ಅಪ್ಪು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Audience comments on puneeth rajkumar's new reality show Family Power, this is viewers opinion .watch this video

Videos similaires